ಡಾ. ಪನಬಾಕಾ ಲಕ್ಷ್ಮೀ (ಜನನ ೬ ಅಕ್ಟೋಬರ್ ೧೯೫೮) ಇವರು ಒಬ್ಬ ಭಾರತೀಯ ರಾಜಕಾರಣಿ. ಇವರು ಮಾಜಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ (೨೦೦೪-೨೦೦೯) ಮತ್ತು ಕೇಂದ್ರ ಜವಳಿ ರಾಜ್ಯ ಸಚಿವೆ (೨೦೦೯-೨೦೧೪) ಆಗಿದ್ದರು .ಇವರು ಆಂಧ್ರಪ್ರದೇಶದ ಬಾಪಟ್ಲಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ ಮತ್ತು ಸಂಯೋಜಿತ ಆಂಧ್ರಪ್ರದೇಶದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸದಸ್ಯರಾಗಿದ್ದರು. ಈಗ ಇವರು ತೆಲುಗು ದೇಶಂ ಪಕ್ಷದ (ಟಿಡಿಪಿ)ದಲ್ಲಿ ಭಾಗಿಯಾಗಿದ್ದಾರೆ. == ವೈಯಕ್ತಿಕ ಜೀವನ == ಡಾ. ಪನಬಾಕಾ ಲಕ್ಷ್ಮೀ ಅವರು ಕಾವಲಿಯ ನೆಲ್ಲೂರಿ(ಆಂಧ್ರ ಪ್ರದೇಶ)ನಲ್ಲಿ ಜನಿಸಿದರು. ಡಾ. ಪಿ. ಕೃಷ್ಣಯ್ಯ ಅವರನ್ನು ವಿವಾಹವಾದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರು ಆಂಧ್ರ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತದಲ್ಲಿ ಎಂ.ಎ ಮುಗಿಸಿದರು. == ವೃತ್ತಿ == ಇವರು ನೆಲ್ಲೂರಿನಿಂದ ೧೧, ೧೨, ಮತ್ತು ೧೪ ನೇ ಲೋಕಸಭೆಗೆ ಮತ್ತು ಬಾಪಟ್ಲಾದಿಂದ ೧೫ ನೇ ಲೋಕಸಭೆಗೆ ಆಯ್ಕೆಯಾಗಿದ್ದರು. ಅವರು ಯು.ಪಿ.ಎ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (೨೦೦೪-೨೦೦೯), ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮತ್ತು ಜವಳಿ ಸಚಿವಾಲಯ (೨೦೧೪) ರಾಜ್ಯ ಸಚಿವೆಯಾಗಿದ್ದರು . ಇವರು ೨೦೧೯ ರ ಲೋಕಸಭಾ ಚುನಾವಣೆಯಲ್ಲಿ ವೈ.ಎಸ್‌.ಆರ್‌.ಸಿ.ಪಿ.ಯ ಬಲ್ಲಿ ದುರ್ಗಾ ಪ್ರಸಾದ್ ರಾವ್ ವಿರುದ್ಧ ಟಿ.ಡಿ.ಪಿ ಯ ಅಭ್ಯರ್ಥಿಯಾಗಿ ತಿರುಪತಿಯಿಂದ ಸ್ಪರ್ಧಿಸಿ ವಿಫಲರಾದರು. ೨೦೨೧ ರಲ್ಲಿ, ಹಾಲಿ ಸಂಸದ ಬಲ್ಲಿ ದುರ್ಗಾ ಪ್ರಸಾದ್ ರಾವ್ ಅವರ ನಿಧನದ ನಂತರ ತೆರವಾಗಿರುವ ಅದೇ ತಿರುಪತಿ ಕ್ಷೇತ್ರದಿಂದ ಅವರು ಲೋಕಸಭಾ ಉಪಚುನಾವಣೆಯಲ್ಲಿ ವಿಫಲರಾದರು. == ಉಲ್ಲೇಖಗಳು ==